Sunday, May 23, 2021

* ಶ್ರೀರಾಮ ವೇದಪಾದ ಸ್ತೋತ್ರಂ *

ಶ್ರೀಮದ್ರಾಮ೦ ರಘೂತ್ತಂಸಂ ಸಚ್ಚಿದಾನಂದ ಲಕ್ಷಣಮ್ ।
ಭವಂತಂ ಕರುಣಾವಂತ೦  ಗಾಯೇ ತ್ವಾ೦ ಮನಸಾ ಗಿರಾ ।।೧।।

ರಾಮೇ ದೂರ್ವಾದಲಶ್ಯಾಮೇ ಜಾನಕೀ ಕನಕೋಜ್ವಲಾ ।
ಭಾತಿ  ಮದ್ದೈವತೇ ಮೇಘೇ ವಿದ್ಯುಲ್ಲೇಖೇವಭಾಸ್ವರಾ ॥೨॥

ತ್ವದನ್ಯ೦ ನ ಭಜೇ ರಾಮ ನಿಷ್ಕಾಮೋsನ್ಯೇ ಭಜ೦ತು ತಾನ್ ।
ಭಕ್ತೇಭ್ಯೋ ಯೇ ಪುರಾ ದೇವಾಃ ಆಯುಃ ಕೀರ್ತಿ೦ ಪ್ರಜಾ೦ದದುಃ ।।೩।।  

ಭಜನಂ ಪೂಜನಂ ರಾಮ ಕರಿಷ್ಯಾಮಿ ತವಾನಿಶಮ್ ।
ಶ್ರಿಯಂ ನೆೇಚ್ಚಾಮಿ ಸಂಸಾರಾತ್ ಭಯಂ ವಿದಂತಿ ಮಾಮಿಹ ।।೪।।

ಶ್ರೀರಾಮ ಜಾನಕೀಜಾನೆೇ ಭುವನೇ ಭವನೇ ವನೇ ।
ಸ್ವಭಕ್ತ ಕುಲಜಾತಾನಾಂ ಅಸ್ಮಾಕಂ ಭವಿತಾ ಭವ  ।।೫।।

ರಾಮ ರಾಮೇತಿ ರಾಮೇತಿ ವದಂತೇ ವಿಕಲಂ ಭವಾನ್ ।
ಯಮ ದೂತೈರನುಕ್ರಾಂತ೦ ವತ್ಸ೦ ಗೌರಿವ ಧಾವತಿ ।।೬।।

ಸ್ವಚ್ಚಂದಚಾರಿಣಂ ದೀನ೦ ರಾಮರಾಮೇತಿ ವಾದಿನಂ ।
ಭಾವಾನ್ ಮಾಮನುನೀಮ್ನೆೇನ ಯಥಾ ವಾರೀವ ಧಾವತಿ ।।೭।।    

ರಾಮತ್ವ೦ ಹೃದಯೇ ಯೇಷಾ೦ ಸುಖ೦ ಲಭ್ಯ೦ ವನೇsಪಿ ತೈಃ ।
ಮಂಡ೦ ಚ ನವನೀತ೦ ಚ ಕ್ಷೀರ೦ ಸರ್ಪಿರ್ಮಧೂದಕಮ್ ॥೮॥

ಪ್ರಾರ್ಥಯೇ ತ್ವಾ೦ ರಘೂತ್ತ೦ಸ ಮಾಭೂನ್ಮಮಕದಾಚನ ।
ಸರ್ವಾತೀರ್ಥೇಷು ಸರ್ವತ್ರ ಪಾಪೇಭ್ಯಶ್ಚ ಪ್ರತಿಗ್ರಹಃ ॥೯॥

ಸರ್ವೇ ಮದರ್ಥ೦ ಕುರುತೋಪಕಾರ೦ ಶ್ರೀರಾಮಮಾಕರ್ಣಯ ಕರ್ಣನಿತ್ಯಮ್ ।
ಮೂರ್ಧನ್ನಮಾಲೋಕಯ ನೇತ್ರ ಜಿಹ್ವೇ ಸ್ತುಹಿ ಶ್ರುತ೦ ಗರ್ತಸದ೦ ಯುವಾನಮ್ ॥೧೦॥

ಭವಾನ್ ರಘೂತ್ತ೦ಸ ದೈವತ೦ ಮೇ
     ಯ೦ ಸಚ್ಚಿದಾನ೦ದ ಘನಸ್ವರೂಪಮ್ ।
ಏಕ೦ ಪರಬ್ರಹ್ಮ ವದ೦ತಿನಿತ್ಯ೦   
     ವೇದಾ೦ತ ವಿಜ್ಞಾನ ಸುನಿಶ್ಚಿತಾರ್ಥಾಃ ॥೧೧॥
    
ಭವತ್ ಕೃಪಾಪಾ೦ಗ ವಿಲೋಕನೇನ
     ವೈಕು೦ಠವಾಸಃ ಕ್ರಿಯತೇ ಜನೇನ ।
ಜ್ಞಾತ್ವಾ ಭವ೦ತ೦ ಶರಣಾಗತೋSಸ್ಮಿ
     ಯಸ್ಮಾತ್ಪರ೦ ನಾಪರಮಸ್ತಿ ಕಿ೦ಚಿತ್  ॥೧೨॥

ದೀನಾನ್ ಭದ್ಭಕ್ತಕುಲ ಪ್ರಸೂತಾನ್
     ಭವತ್ಪದಾರಾಧನ ಹೀನ ಚಿತ್ತಾನ್ ।
ಅನಾಥಬ೦ಧೋ ಕರುಣೈಕ ಸಿಂಧೋ
     ಪಿತೇವ ಪುತ್ರಾನ್ ಪ್ರತಿನೋಜಷಸ್ವ ॥೧೩॥
    
ಭವಾನ್ ಭಯವ್ಯಾಘ್ರ ಭಯಾಭಿಭೂತ೦
        ಜರಾಭಿಭೂತ೦ ಸಹಲಕ್ಷ್ಮಣೇನ   ।
ಸದೈವ ಮಾ೦ ರಕ್ಷತು ರಾಘವೇಶ
        ಪಶ್ಚಾತ್ಪರಸ್ತಾದಧರಾದುದಕ್ತಾತ್   ॥೧೪॥

ಕಾಮಾದ್ಯಪಥ್ಯೇನ ವಿವರ್ಧಮಾನ೦
      ರೋಗ೦ ಮದೀಯ೦ ಭವನಾಮಧೇಯ೦  ।
ದೂರೀಕುರುತ್ವ೦ ಯದಹ೦ ತ್ರಿಲೋಕ್ಯಾ೦
      ಭಿಷಕ್ತಮ೦ ತ್ವಾ೦ ಭಿಷಜಾ೦ ಶೃಣೋಮಿ   ॥೧೫॥
      
ಶ್ರೀರಾಮಚ೦ದ್ರಃ ಸ ಜಯತ್ಯಜಸ್ರ೦
        ಲಂಕಾಪುರೀ ದ್ರೋಣಗಿರೌ ಪಯೋಬ್ದೌ।
ಯಸ್ಯ ಪ್ರಸಾದಾದಭವಧ್ಧ ನೂಮಾನ್
        ಅಣೋರಣೀಯಾನ್ ಮಹತೋ ಮಹೀಯಾನ್ ॥೧೬॥
        
ಶ್ರೀರಾಮ ರಾಮೇತಿ ರಘೂತ್ತಮೇತಿ
      ನಾಮಾನಿ ಜಲ್ಪೇದ್ಯದಿ ತಸ್ಯ ತತ್ ಕ್ಷಣಾತ್ ।
ದಿಶೋ ದ್ರವ್ಯ೦ತ್ಯೇವ ಯುಯುತ್ಸವಃ ಸದಾ
     ಭಿಯ೦ ದಧಾನಾ ಹೃದಯೇಷು ಶತ್ರವಃ ॥೧೭॥
    
ಅನಾದಿಮವ್ಯಕ್ತ ಮನ೦ತಮಾದ್ಯ೦
       ಸ್ವಯ೦ ಪರ೦ ಜ್ಯೋತಿಷಮಪ್ರಮೇಯಮ್  ।
ವಿಲೋಕಯೇ ದಾಶರಥೇ ಕದಾ ತ್ವಾ೦
       ಅದಿತ್ಯವರ್ಣ೦ ತಮಸಃ ಪರಸ್ತಾತ್             ॥೧೮॥

ಶ್ರೀರಾಘವ ಸ್ವೀಯ ಪದಾರವಿ೦ದೇ
     ಸೇವಾ೦ ಭವಾನ್ನಃ ಸತತ೦ ದದಾತು ।
ವಯ೦ ಸ್ವಜನ್ಮಾ೦ತರ ಸ೦ಚಿತಾನಿ
    ಯಯಾSತಿ ವಿಶ್ವಾ ದುರಿತಾ ತರೇಮ     ॥೧೯॥

ಭೋಚಿತ್ತ ಚೇತ್ಕಾಮಯಸೇ ವಿಭೂತಿ೦
    ತಮೇವ ಸ೦ಪ್ರಾರ್ಥಯ ವೀರಮೇಕಮ್ ।
ರಘೂತ್ತಮ೦ ಶ್ರೀರಮಣ೦ ಸದಾ ಯಃ
    ಶ್ರೀಣಾಮುದಾರೋ ಧರುಣೋ ರಯೀಣಾಮ್ ॥೨೦॥

ವ೦ದೇsರವಿ೦ದೇಕ್ಷಣಮ೦ಬುದಭ೦
        ಆಕರ್ಣನೇತ್ರ೦ ಸುಕುಮಾರ ಗಾತ್ರಮ್ ।
ಯ೦ ಜಾನಕೀ ಹರ್ಷಯತೀ ವನೇsಪಿ
         ಪ್ರಿಯ೦ ಸಖಾಯ೦ ಪರಿಷಸ್ವಜಾನಾ    ॥೨೧॥

ಸೀತಾ ಜಾನೇ ನೈವ ಜಾನೇ ತ್ವದನ್ಯ೦
        ತ್ಯಕ್ತ ಶ್ರೀ ಸ್ತ್ರೀ ಪುತ್ರಕಾಮಃ ಸದಾsಹಮ್ ।
ತ್ವಾ೦ ಸ್ಮೃತ್ವಾs೦ತೇ ದೇವಯಾನಾಧಿರೂಢಃ
          ತತ್ವಾಯಾಮಿ ಬ್ರಹ್ಮಣಾ  ವ೦ದಮಾನಃ   ॥೨೨॥

ಅಹ೦ ಭರದ್ವಾಜಮುನಿರ್ನಿರ೦ತರ೦
           ಶ್ರೀರಾಮಮೇಕ೦ ಜಗದೇಕ ನಾಯಕ೦ ।
ಸ೦ವರ್ಣಯೇ ಕಾವ್ಯ ರಸಾದಿವಿತ್ತಮ೦
           ಕವಿ೦ ಕವೀನಾಮುಪಮಶ್ರವಸ್ತಮಮ್    ॥೨೩॥

ಪಠ೦ತಿ ಸ್ತುತಿ೦ ಯೇನರಾ ಋದ್ಧಿಕಾಮಾಃ
       ಸಮೃದ್ಧಿ೦ ಚಿರಾಯುಷ್ಯ ಮಾಯುಷ್ಯಕಾಮಾಃ ।
ಲಭ೦ತೇಹ ನಿಸ್ಸ೦ಶಯ೦ ಪುತ್ರಕಾಮಾಃ
       ಲಭ೦ತೇಹ ಪುತ್ರಾನ್ ಲಭ೦ತೇಹ ಪುತ್ರಾನ್   ॥೨೪॥       


ವೇದ ಪಾದಾಭಿಧಸ್ತೋತ್ರ೦ ಸ್ನಾತ್ವಾ ಭಕ್ತ್ಯಾ ಸಕೃನ್ನರಃ  ॥
     ಯಃ ಪಠೇದ್ರಾಘವಸ್ಯಾಗ್ರೇ ಜೀವಾತಿ ಶರದಃ ಶತಮ್ ॥೨೫॥


ಇತಿ ಶ್ರೀ ಭರಧ್ವಾಜಮಹರ್ಷಿಪ್ರಣೀತ೦
--  ಶ್ರೀರಾಮ ವೇದಪಾದ ಸ್ತೋತ್ರಂ --

** ಶ್ರೀ ಕೃಷ್ಣಾರ್ಪಾಣಮಸ್ತು **       

        

Friday, December 17, 2010

ಶ್ರೀ ರಾಮ ಹೃದಯಂ

*********************************************************
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
*********************************************************
ಶ್ರೀ ಮಹದೇವ ಉವಾಚ:-

ತತೋ ರಾಮಃ ಸ್ವಯಂ ಪ್ರಾಹ ಹನುಮಂತ ಮುಪಸ್ಥಿತಂ |
ಶೃಣು ತತ್ವಂ ಪ್ರಾವಕ್ಷ್ಯಾಮಿ ಹ್ಯಾತ್ಮಾನಾತ್ಮ ಪರಾತ್ಮ ನಾಮ್. ||

ಆಕಾಶಸ್ಯ ಯಥಾ ಭೇಧಸ್ತ್ರಿವಿಧೋ ದೃಶ್ಯತೇ ಮಹಾನ್
ಜಲಾಶಯೇ ಮಹಾಕಾಶಸ್ತದವಚಿನ್ನ ಏವ ಹಿ |
ಪ್ರತಿ ಬಿಂಬಾಖ್ಯಮಪರಂ ದೃಶ್ಯತೇ ತ್ರಿವಿಧಾಂ ನಭಃ |
ಬುಧ್ಯವಚ್ಛಿನ್ನ ಚೈತನ್ಯ ಮೇಕಂ ಪೂರ್ಣ೦ ಯಥಾ ಪರಮ್ ||

ಆಭಾಸಸ್ತ್ವಪರಂ ಬಿಂಬಭೂತಮೇವಂ ತ್ರಿಧಾ ಚಿತಿಃ |
ಸಾಭಾಸಬುದ್ಧೇಃ ಕರ್ತೃತ್ವಮವಿಚಿನ್ನೇS ವೀಕಾರಿಣೀ ||

ಸಾಕ್ಷಿಣ್ಯಾರೋಪ್ಯತೇ ಭ್ರಾಂತ್ಯಾ ಜೀವತ್ವಂ ಚ ತಥಾ ಬುಧೈ |
ಆಭಾಸಸ್ತು ಮೃಷಾ ಬುದ್ಧಿರ ವಿದ್ಯಾ ಕಾರ್ಯಮುಚ್ಯತೇ ||

ಅವಿಚ್ಛಿನ್ನಮ್ ತು ತದ್ಬ್ರಹ್ಮ ವಿಚ್ಛೇದಸ್ತು ವಿಕಲ್ಪಿತ |
ಅವಿಚ್ಛಿನ್ನಸ್ಯ ಪೂರ್ಣೇನಾ ಏಕತ್ವಂ ಪ್ರತಿಪಧ್ಯತೇ ||

ತತ್ವಮಸ್ಯಾದಿ ವಾಕ್ಯೈಶ್ಚ ಸಾಭಾ ಸಸ್ಯಾಹಮಸ್ತಥಾ |
ಐಕ್ಯ ಜ್ಞಾನಮ್ ಯದೋತ್ಪನ್ನಂ , ಮಹಾ ವಾಕ್ಯೇನ ಚಾತ್ಮನೋಃ ||

ತದಾS ವಿದ್ಯಾಸ್ವಕಾರ್ಯೈಶ್ಚ ನಶ್ಯತ್ಯೇಪನ ಸಂಶಯಃ |
ಏತದ್ವಿಜ್ಞಾಯ ಮದ್ಭಕ್ತೋ ಮಾದ್ಭಾವಾಯೋಪಪದ್ಯತೇ ||

ಮದ್ಭಕ್ತಿ ವಿಮುಖಾನಂ ಹಿ ಶಾಸ್ತ್ರ ಗರ್ತೇಷು ಮುಹ್ಯತಾಮ್ |
ನ ಜ್ಞಾನಮ್ ನ ಮೋಕ್ಷ ಸ್ಯಾತ್ ತ್ತೇಷಾ೦ ಜನ್ಮಶತೈರಪಿ ||

ಇದಂ ರಹಸ್ಯಂ ಹೃದಯಂ ಮಮಾತ್ಮನೋ
ಮಯೈವ ಸಾಕ್ಷಾತ್ ಕಥಿತಂ ತವಾನಘ |
ಮದ್ಭಕ್ತಿ ಹೀನಾಯ ಶಠಾಯ ನ ತ್ವಯಾ
ದಾತವ್ಯಮೈ೦ದ್ರಾದಪಿ ರಾಜ್ಯತೋSದಿಕಂ ||

|| ಇತಿ ಶ್ರೀ ಮದಧ್ಯಾತ್ಮ ರಾಮಾಯಣೇ ಬಾಲಕಾಂಡೇ ಶ್ರೀ ರಾಮ ಹೃದಯಂ ||

Thursday, November 4, 2010

$ ಶ್ರೀ ರಾಮ ಪ್ರಾತಃ ಸ್ಮರಣಮ್ $

|| ಶ್ರೀರಸ್ತು ||
|| ಶ್ರೀ ರಾಮ ಸಮರ್ಥ ||

$ ಶ್ರೀ ರಾಮ ಪ್ರಾತಃ ಸ್ಮರಣಮ್ $

===============================


ಪ್ರಾತಃ ಸ್ಮರಾಮಿ ರಘುನಾಥ ಮುಖರವಿಂದಂ ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ |
ಕರ್ಣಾವಾಲಂಬಿ ಚಲ ಕಂಡಲಶೋಭಿಗಂಡಂ ಕರ್ಣಾ೦ತದೀರ್ಘನಯನಂ ನಯನಾಭಿರಾಮಮ್ || 1 ||

ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ ರಕ್ಷೋಗಣಾಯ ಭಯದಂ ವರದಂ ನಿಜೇಭ್ಯಃ |
ಯಧ್ ರಾಜಸಂಸಧಿ ವಿಭಿಧ್ಯ ಮಹೇಷಚಾಪಮ್ ಸೀತಾಕರಗ್ರಹಣಮಂಗಲಮಾಪಸದ್ಯಃ || 2 ||

ಪ್ರಾತರ್ನಮಾಮಿ ರಘುನಾಥಪದಾರವಿಂದಂ ಪದ್ಮಾಂಕುಶಾದಿ ಶುಭರೇಖಿ ಸುಖಾವಹಂ ಮೇ |
ಯೋಗೀ೦ದ್ರ ಮಾನಸ ಮಧುವ್ರತಸೇವ್ಯಮಾನ೦ ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || 3 ||

ಪ್ರಾತರ್ವದಾಮಿ ವಚಸಾ ರಘುನಾಥನಾಮ ವಾಗ್ದೋಷಹಾರಿ ಸಕಲಂ ಕಮಲಂ ಕರೋತಿ |
ಯತ್ ಪಾರ್ವತೀ ಸ್ವಪತಿನಾ ಸಹಭೋಕ್ತುಕಾಮಾ ಪ್ರೀತ್ಯಾ ಸಹಸ್ರ ಹರಿನಾಮಸಮ೦ ಜಜಾಪ || 4 ||

ಪ್ರಾತಃಶ್ರಯೇ ಶ್ರುತಿನುತಾ೦ ರಘುನಾಥಮೂರ್ತಿ೦ ನೀಲಾಂಬುಜೋತ್ಪಲ ಸಿತೇತರರತ್ನನೀಲಾಮ್ |
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಡ್ಯಾ೦ ದ್ಯೇಯಾ೦ ಸಮಸ್ತಮುನಿಭಿರ್ಜನ ಮುಕ್ತಿ ಹೇತುಮ್ || 5 ||

ಯಃ ಶ್ಲೋಕ ಪಂಚಕಮಿದಂ ಪ್ರಯತಃ ಪಠೇತ್ತು ನಿತ್ಯಂ ಪ್ರಭಾತಸಮಯೇ ಪುರುಷಃ ಪ್ರಬುದ್ಧಃ |
ಶ್ರೀರಾಮ ಕಿಂಕರ ಜನೇಷು ಏವ ಮುಖ್ಯೋ ಭೂತ್ವಾ ಪ್ರಯಾಸಿ ಹರಿಲೋಕವನನ್ಯಲಭ್ಯಮ್ || 6 ||

Wednesday, October 27, 2010

ಮಾಘ ಮಳೆ ನೆನೆಯೇ ರಾಮನ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ಬರದ ಬಾಳಿಗೆ ಹಸಿರನೀಯ ಬಾರದೆ
ಆರಿದ ಹೃದಯಕೆ ಅಮೃತನೀಯ ಬಾರದೆ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ಹರುಷದ ಸ್ಪರ್ಶದಿ ಭೂಮಿ ಮಿಂದಳು
ಹೊಸದಾದ ಸುಮಧುರ ಸುವಾಸನೆ ಬೀರಿಹಳು

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ನೀಲಿ ಕಂಗಳ ಕಣ್ಣೀರಿನಿಂದ ನಮ್ಮ ನೆನೆದೆ
ನನ್ನ ಪ್ರೀತಿಯ ರಾಮನ ಒಮ್ಮೆ ನೆನೆಯ ಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ತುಂತುರು ಹನಿಗಳ ಮಧುರ ಮಾಲೆಯ ಹೆಣೆದೆ
ನನ್ನ ಪ್ರೀತಿಯ ರಾಮನಿಗೆ ಆ ಮಾಲೆ ಸಿಂಗರಿಸಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

Sunday, August 8, 2010

ನೆನೆಯೆ ರಾಮ ನಾಮವಾ

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ನಾನು ಎಂಬ ರಾಗದಲ್ಲಿ
ತಾಳ ತಂತಿ ಹರಿಯಿತಲ್ಲ
ಕರಗಿ ಕರಗಿ ಹೋಯಿತಲ್ಲ
ಆಯು ಎಂಬ ಮಾಯೆಯು ..

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ಸಂತನಂತೆ ಬಂದೆ ಇಲ್ಲಿ
ಸಂತೆಯಲ್ಲಿ ಕಳೆದೆನಾ
ಮಧುರ ಭಾವ ಬೆಳೆಯಲಿಲ್ಲ
ಕ್ಷಮಿಸು ನಿನ್ನ ನೆನಯಲಿಲ್ಲ ..

Monday, March 22, 2010

ದೇವರು

ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ. ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ.


ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು.


ನಿನಗೆ ಎಷ್ಟು ಜನ ಪರಿಚಯ?


ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦ ಜನ ಎಂದ.


೧೦೦೦೦ ಜನಗಳ ಬಿಟ್ಟು ಬೇರೆ ಜನಗಳೇ ಗೊತ್ತಿಲ್ಲ ನಿನಗೆ. ಆದಿ ಕಾಲದಿಂದಲೂ ಕೋಟಿ ಕೋಟಿ ಜನ ನಂಬಿರುವ ದೇವರ ಬಗ್ಗೆ ಅನುಮಾನವಾ?... ಎಂದರು.


ಮತ್ತೊಂದು ಪ್ರಶ್ನೆ ಮುಂದಿಟ್ಟರು.


ನಿನ್ನ ಇರುವಿಕೆ ಹೇಗೆ ಸಮರ್ಥಿಸುವೆ ಎಂದು.


ನಾನು ನಿಮ್ಮ ಜೊತೆ ಮಾತನಾಡುತ್ತಿರುವೇನಲ್ಲ ಎಂದ.


ನೀನು ಹೇಗೆ ಧರೆಗೆ ಬಂದೆ.


ನನ್ನ ತಂದೆ ಮತ್ತು ತಾಯಿಗಳಿಂದ.


ಹಾಗೆ ನಿನ್ನ ತಂದೆ ಇರುವಿಕೆ ಸಮರ್ಥಿಸು ಎಂದರು.


ನನ್ನ ಅಜ್ಜ ಮತ್ತು ಅಜ್ಜಿ ಎಂದ.


ಮತ್ತೆ ನಿಮ್ಮ ಅಜ್ಜನ ಇರುವಿಕೆ ಸಮರ್ಥಿಸು ಎಂದರು.


ಅವನು ಮತ್ತೆ ಮುತ್ತಜ್ಜ ಮಾತು ಮುತ್ತಜ್ಜಿ ಎಂದ.


ಹಾಗೆ ಮತ್ತೆ ಮುತ್ತಜ್ಜ ಇರುವಿಕೆ ಸಮರ್ಥಿಸು ಎಂದರು.


ಅವನು ಹಾಗೆ ಗಿರಿ ಮುತ್ತಜ್ಜ ಮತ್ತು ಗಿರಿ ಮತ್ತಜ್ಜಿ ಎಂದ..


ನಿನ್ನ ಗಿರಿ ಮುತ್ತಜ್ಜ ಇದ್ದ .. ಅಂತ ಹೇಗೆ ಹೇಳುವೆ ನೀನು ಹೇಳುವದೆಲ್ಲ ಸುಳ್ಳು ಎಂದರು .....ಈಗ ಅವರನ್ನು ತೋರಿಸು ಎಂದರು.


ಆಗ ಅವನ ತಪ್ಪಿನ ಅರಿವಾಗಿ ಆ ಸಾಧುಗಳ ಶಿಷ್ಯನಾಗಿ ಹೋದ.

ಶ್ರೀ ಗುರುವಾಣಿ

ಒಂದು ದಿವಸ ಗುರುಗಳ ಬಳಿ ಬಂದ ಒಬ್ಬ ಮನುಷ್ಯ. ಗುರುಗಳಿಗೆ ನಮಸ್ಕರಿಸಿ, ಗುರುಗಳೇ ನನಗೆ ದೇವರ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದ. ಆಗ ಗುರುಗಳು ಶಾಂತ ಚಿತ್ತದಿಂದ ಅವನಿಗೆ ತಮ್ಮ ಬಳಿ ಬರಮಾಡಿಕೊಂಡು, ನಿನ್ನ ಸಮಸ್ಯೆ ಏನು ಎಂದು ಕೇಳಿದರು. ಅದಕ್ಕೆ ನಾನು ದೇವರ ಬಗ್ಗೆ ತುಂಬಾ ನಂಬಿಕೆ ಇಟ್ಟು ಕೊಂಡಿದ್ದೆ. ದಿನವು ಪೂಜೆ ಮಾಡುತ್ತಿದ್ದೆ. ಒಮ್ಮೆ ನಾನು ಸೋಲಾಪುರದಲ್ಲಿ, ನನ್ನ ಒಬ್ಬ ಗೆಳೆಯನನ್ನು ಭೇಟಿ ಮಾಡಿದೆ. ಅವ ಆಗರ್ಭ ಶ್ರೀಮಂತ. ಅವನಿಗೆ ದೇವರ ಬಗ್ಗೆ ಸ್ವಲ್ಪ ಕೂಡ ನಂಬಿಕೆ ಇಲ್ಲ. ಆದರು ದೇವರು ಅವನಿಗೆ ಎಲ್ಲವನ್ನು ಕರುಣಿಸಿದ್ದಾನೆ. ನನಗೆ ಏಕೆ ಹೀಗೆ? ಎಂದು ಕೇಳಿದ. ಆಗ ಗುರುಗಳು ನೀನು ನಿನ್ನನ್ನು ಏಕೆ ಅವನ ಜೊತೆ ಏಕೆ ಹೊಂದಾಣಿಕೆ ಮಾಡಿ ಯೋಚಿಸುವೆ. ಅದು ಅವನು ಪಡೆದ ಕರ್ಮದ ಫಲ. ನಿನಗೆ ಏನು ಬೇಕು ಹೇಳು ನಾನು ನಿನಗೆ ಕೊಡಬಲ್ಲೆ ಎಂದರು. ಆಗ ಆ ವ್ಯಕ್ತಿ ತುಂಬಾ ಯೋಚನಗೆ ಬಿದ್ದ. ತುಂಬಾ ಹೊತ್ತು ಯೋಚಿಸಿ ಗಲಿಬಿಲಿಗೊಂಡು ಕಡೆಗೆ ನನಗೆ 10 ಕೋಟಿ ರೂಪಾಯಿಗಳು ಬೇಕು. ಆಗ ಗುರುಗಳು ಆಯಿತು ಕೊಡುತ್ತೇನೆ. ಆದರೆ ನೀನು ಶ್ರೀ ರಾಮ ನಾಮಸ್ಮರಣೆ ಮಾಡುತ್ತ ಕೆಲ ದಿನ ಇಲ್ಲಿ ಉಳಿದು ಕೊಳ್ಳಬೇಕು ಎಂದರು. ಮತ್ತೆ ಎರಡು ದಿವಸ ಆದ ಮೇಲೆ ಆ ಮನುಷ್ಯ ನನಗೆ 20 ಕೋಟಿ ಬೇಕು ಎಂದ. ಮತ್ತೆ ಆಯಿತು ಎಂದರು ಗುರುಗಳು. ದಿನವು ನಾಮಸ್ಮರಣೆ, ಭಜನೆ ಮಾಡುತ್ತ ಒಂದು ತಿಂಗಳು ಕಳೆದವು. ಆ ಮನುಷ್ಯ ತುಂಬಾ ಕೋಪಗೊಂಡು ಒಂದು ದಿವಸ ನಾಮಸ್ಮರಣೆಗೆ ಬರಲಿಲ್ಲ. ಆಗ ಗುರುಗಳು ಎಲ್ಲಿ ಆ ಮನುಷ್ಯ ಎಂದು ಶಿಷ್ಯರನ್ನು ಕೇಳಿದರು. ಆಗ ಶಿಷ್ಯರು ಅವರು 20 ಕೋಟಿ ರುಪಾಯಿ ಸಿಗುವವರೆಗೂ ಅವರು ಬರುವದಿಲ್ಲವಂತೆ ಎಂದು ಹೇಳಿದರು. ಆಗ ಗುರುಗಳು ಅವರ ಬಳಿ ಹೋಗಿ, ಇಂದಿನ ನಾಮಸ್ಮರಣೆ, ಭಜನೆ, ಪ್ರಸಾದ ಆದ ಮೇಲೆ ನಿಮಗೆ ಒಂದು ಕೊಡುವೆ ಎಂದು ಹೇಳಿದರು. ಪ್ರಸಾದವಾದ ಬಳಿಕ ಗುರುಗಳು ಅವನನ್ನು ಕರೆದುಕೊಂಡು ಹೋಗಿ ನೋಡು ಇಲ್ಲಿದೆ ನಿನ್ನ ದುಡ್ಡು ಎಂದು ತೋರಿಸಿದರು. ಆಗ ಆ ಮನುಷ್ಯ ತುಂಬಾ ಸಂತೋಷಗೊಂಡ. ಮತ್ತು ಕೆಲವೇ ನಿಮಿಷದಲ್ಲಿ ಮತ್ತೆ ಚಿಂತೆಯಲ್ಲಿ ಮುಳುಗಿದ. ಆಗ ಗುರುಗಳು ನಿನಗೆ ನಿನ್ನ ಮೇಲೆ ಭರವಸೆ ಇಲ್ಲ ಎಂದರು. ನೀನು ಕೇಳಿದ್ದು 10 ಕೋಟಿ, ಮತ್ತೆ 2 ದಿವಸ ಆದ ಮೇಲೆ 20 ಕೋಟಿ ಬೇಕು ಎಂದೇ. ನಾನು ಅದನ್ನೇ ನಿನಗೆ ಕೊಟ್ಟಿರುವೆ. ಆದರು ನಿನ್ನ ಚಹರೆ ಮೇಲೆ ಚಿಂತೆಯ ಛಾಯೆ ಇದೆ. ದೇವರು ಅವನ ಯೋಗ್ಯತೆ ತಕ್ಕಂತೆ ಅವನಿಗೆ ಎಲ್ಲವನ್ನು ಕರುಣಿಸಿದ್ದಾನೆ. ಆದರೂ ನಮ್ಮ ದುರಾಸೆಯ ಛಾಯೆ ಬಿಡುವದಿಲ್ಲ. ನಿನ್ನ ಗೆಳೆಯನಿಗೆ ದೇವರ ಮೇಲೆ ನಂಬಿಕೆ ಇಲ್ಲದಿದ್ದರೂ ಅವನಿಗೆ ಅಷ್ಟು ಶ್ರೀಮಂತಿಕೆ ಬಂದಿದ್ದು ನಿನಗೆ ಸಹಿಸಿ ಕೊಳ್ಳಲಾಗಲಿಲ್ಲ. ಮೊದಲು ನಿನಗೆ ಬೇಕಾಗಿದ್ದು ಮನಶಾಂತಿ. ಇಷ್ಟಾದರೂ ನಿನಗೆ ದುಡ್ಡು ಬೇಕೆಂದರೆ ನೀನು ಧಾರಾಳವಾಗಿ ತೆಗೆದುಕೊಂಡು ಹೋಗು ಎಂದರು. ಆಗ ಆ ಮನುಷ್ಯ ಆ ದುಡ್ಡನ್ನು ತೆಗೆದು ಕೊಂಡು ಹೋಗಲು ಆಲೋಚಿಸಿ, ಬೇಕಾಗುವ ಬಂಡಿಗಳನ್ನು ಲೆಕ್ಕ ಹಾಕತೊಡಗಿದ. ಮತ್ತೆ ದಾರಿಯಲ್ಲಿ ಎಂದರು ಕಳ್ಳತನ ವಾದರೆ ಎಂಬ ಭಯ ಬೇರೆ ಕಾಡ ತೊಡಗಿತು. ಆಗ ಆ ಮನುಷ್ಯ ನನಗೆ ಈ ಎರಡು ಕೋಟಿ ಗಿಂತ ನಿಮ್ಮ ಸಾನಿಧ್ಯ ಮತ್ತು ಮನಃ ಶಾಂತಿ ಬೇಕೆಂದು ಹೇಳಿ ಗುರುಗಳ ಶಿಷ್ಯನಾಗಿ ನಾಮಸ್ಮರಣೆ ಮಾಡುತ್ತ ಉಳಿದುಕೊಂಡ.

Tuesday, January 5, 2010

ಹರಿಯ ಮಂದಿರ ಹನುಮ ಹೃದಯ

(ಮೊದಲ ಬಾರಿ ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದು ಏನಾದರೂ ತಪ್ಪಿದ್ದರೆ ತಿಳಿಸಿ.)

ಹರಿಯ ಮಂದಿರ ಹನುಮ ಹೃದಯ
ರಾಮ ಚಂದಿರ ಒಲಿದ ಹೃದಯ
ಸೀತೆಯ ಹುಡುಕಿದ ರಾಮ ಚಂದ್ರ ಪ್ರೀತಿಗಳೆಸು ತಾ
ಹರಿಯ ಕೀರ್ತಿಯ ಜಗಕೆ ಸಾರಿದೆ
ರಾಮ ಮಂತ್ರವ ಶ್ರೇಷ್ಠ ವೆಂದೆ
ನಾಮ ಮಾತ್ರದಿ ಶನಿಯ ಕಾಟದಿ ನಿ ಕಾಪಾಡುತಾ

Wednesday, June 24, 2009

ನೋವನ್ನು ಮರೆಯುವದು ಹೇಗೆ .....

ಹಲವು ಬಾರಿ ನಾವು ಏನೋ ತೊಂದರೆ ಅಥವಾ ಕಷ್ಟ ಅನುಭವಿಸ್ತಿರ್ಥಿವಿ. ನಾವು ಮಾನಸಿಕವಾಗಿಯೋ ಅಥವಾ ದೈಹಿಕವಾಗಿಯೋ ತೊಂದರೆ ಅನುಭವಿಸಿರುತ್ತೆವೆ. ಅದರಿಂದ ಹೊರಗೆ ಬರುವುದು ಹೇಗೆ?. ಅದರಿಂದ ಹೊರಬರುವ ಒಂದು trick ಹೇಳುತ್ತೇನೆ . ನಾವು ಅನುಭಿಸುತ್ತಿರುವ ಕಷ್ಟ ತುಂಬಾ ನಿಸ್ಕೃಷ್ಟವಾದ ಕಷ್ಟ ಎಂದು ತಿಳಿದು ನಡೆಯುವದು. ಅದು ಹೇಗೆಂದರೆ ಈಗೆ ಆಗಿರುವ ತೊಂದರಿಗಿಂತ ದೊಡ್ಡದೊಂದು ತೊಂದರೆ ನಮಗೆ ಬರಬಹುದಾಗಿತ್ತು ಅದು ಇಷ್ಟರಲ್ಲಿ ಮುಗಿದೆದೆ ಅಂತ ತಿಳಿಯುವದು. ಎಲ್ಲ ತೊದರೆಗಳಿಗಿಂತ ಮಾನಸಿಕವಾಗಿ ಅನುಭವಿಸುವ ತೊಂದರೆ ತುಂಬಾ ಅಪಾಯಕಾರಿ. ನಮಗೆ ನಿಜವೆನ್ನಿಸಿದ ತೊಂದರೆಯನ್ನು ಯಾರಿಗಾದರೂ ಹೇಳಿದರೆ ಅದರಿಂದ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತೆ. ಅದು ಬಿಟ್ಟು ಮನಸಿನಲ್ಲೇ ಕೊರಗಿದರೆ ನಮಗೆ ಸಿಗುವ ಲಾಭ ಮಾತ್ರ ದೊಡ್ಡದೊಂದು ಸೊನ್ನೆ. ಯಾವ ಕಷ್ಟವೆ ಇರಲಿ ಅದು ಆ ಕ್ಷಣಕ್ಕೆ ಮಾತ್ರ ದೊಡ್ಡದೆಂದು ಅನ್ನಿಸಿರುತ್ತೆ . ಅದಕ್ಕೆ ಹೇಳುವದು "ಕಾಲಾಯ ತಸ್ಮೈಯ ನಮಃ " ಅಂತ.
ನಾವು ಅನುಭವಿಸುವ ಕಷ್ಟ ತೊಂದರೆ ಯನ್ನು ಒಂದು ಹಾಳೆಯ ಮೇಲೆ ಬರೆದು ಅದರಿಂದ ಬರುವ Solution ಗಳೆನೆಂದು ಯೋಚಿಸಿದಾಗ ಮಾತ್ರ ಪರಿಹಾರ ಗೊತ್ತಾಗುವದು (Every Problem has a Solution). ಯಾವ ತೊಂದರೆಗಳು ತಾನಾಗೇ ಬರುವದಿಲ್ಲ ಅದನ್ನು ನಾವು ಅವಹಾನಿಸಿರುತ್ತೇವೆ . ಅದು ಬರುವ ಮೊದಲೇ ಅದನ್ನು ತಡೆಯುವ ಯೋಚನೆ ಮಾಡಬೇಕಾಗುತ್ತೆ . ನಾವು ಪ್ರತಿ ರಾತ್ರಿ ಮಲಗುವ ಮೊದಲು ನಮ್ಮ ಮುಖವನ್ನು ಕನ್ನಡಿಯಲ್ಲಿ ನಾವೇ ನೋಡಿಕೊಳ್ಳಬೇಕು ನಮ್ಮ ಮುಖ ನಮಗೆ ಯಾವತ್ತಾದರೂ ವಕ್ರ ಅಥವಾ ಅಸಹ್ಯವೆನಿಸಿದಾಗ ನಾವು ಏನೋ ತಪ್ಪು ಮಾಡಿದ್ದೇವೆ ಅಂತ ತಿಳಿಯಬೇಕು . ಅದನ್ನು ನಾವು ಗೆಳೆಯರ ಜೊತೆ ಮಾತುಕತೆ ಇಂದ ಪರಿಹಾರ ಮಾಡಿಕೊಳ್ಳಬಹುದು . ಸಾರೀ ಕೆಳುವದರಿಂದ ಯಾರದು ಮಾನ ಮರ್ಯಾದೆ ಹೋಗುವದಿಲ್ಲ . ನಾವು ಯಾವುದೇ ಕೆಲಸ ಮಾಡುವಾಗ ಅಥವಾ ಮಾತನಾಡುವಾಗ ಅದರ ಅಂತಿಮ ತೀರ್ಪು (End Result) ತಿಳಿದು ಮಾಡಬೇಕು. ಇದರಿಂದ ನಮಗಾಗುವ ಅನೇಕಾನೇಕ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು .
ಇವತ್ತು ಒರಿಸ್ಸಾ ಪುರಿ ಜಗನ್ನಾಥ ಸ್ವಾಮಿಯ ರಥ ಯಾತ್ರೆ . ಭಗವಂತ ಸದಾ ಎಲ್ಲರಿಗು ನೋವು ಮರೆಯುವ ಮತ್ತು ಪ್ರೀತಿಯಿಂದ ಮೆರೆಯುವ ಶಕ್ತಿ ಕೊಡಲೆಂದು ದೇವರನ್ನು ಪ್ರಾರ್ಥಿಸೋಣ ......
ಜೈ ಜಗನ್ನಾಥ .....

ಚಿತ್ರ ಕೃಪೆ : ಅಂತರ್ಜಾಲ

Monday, June 15, 2009

ಶ್ರೀ ಗುರು ವಾಣಿ


ಶ್ರೀ ರಾಮ ಸಮರ್ಥ


ದೇವರು ಪ್ರತಿಯೊಬ್ಬ ಮನುಷ್ಯನಿಗೂ ಅವನ ಯೋಗ್ಯತೆಗೆ ತಕ್ಕಹಾಗೆ ಪುರುಷಾರ್ಥಗಳಾದ ಕೀರ್ತಿ, ಯಶಸ್ಸು ಮತ್ತು ಸಂಪತ್ತನ್ನು ಕೊಟ್ಟಿರುತ್ತಾನೆ.

ದೇವರು ಮನುಷ್ಯನಿಗೆ ಕೊಟ್ಟಿರುವ ಪುರುಷಾರ್ಥ ರೂಪಗಳನ್ನು ಯಾವ ಯಾವ ಯೋಗ್ಯ ಕೃತಿಗಳಿಗೆ ಉಪಯೋಗಿಸುತ್ತಾನೆ ಎಂದು ಗಮನಿಸುತಿರುತ್ತಾನೆ.


ಮನುಷ್ಯನ ಕೃತಿಗಳು ಅಯೋಗ್ಯವೆನ್ದೆನಿಸಿದಾಗ ಕೊಟ್ಟಿರುವ ಪುರುಷಾರ್ಥ ರೂಪಗಳಿಂದ ಮುಕ್ತ ಮಾಡಿ, ಮನುಷ್ಯನನ್ನು ಅಯೋಗ್ಯನನ್ನಾಗಿ ಮಾಡುತ್ತಾನೆ. ಆದ್ದರಿಂದ ಮನುಷ್ಯನು ಯಾವಾಗಲು ಒಳ್ಳೆಯ ಕೃತಿಗಳನ್ನು ಮಾಡುತ್ತ ಭಗವಂತನ ನಾಮಸ್ಮರಣೆಯಲ್ಲಿ ನಿರತನಾಗಿರಬೇಕು.


ಶ್ರೀ ರಾಮ ಜಯ ರಾಮ ಜಯ ಜಯ ರಾಮ.

Wednesday, June 3, 2009

Hanuman Stotra


श्री हनुमान स्तोत्र


ಚಿತ್ರ ಕೃಪೆ : ಅಂತರ್ಜಾಲ

ಜೈ ಶ್ರೀ ರಾಮ


ಚಿತ್ರ ಕೃಪೆ:ಅಂತರ್ಜಾಲ

ಇದು ಭದ್ರಾಚಲಂ ನಲ್ಲಿ ಇರುವ ಶ್ರೀ ರಾಮ ಮಂದಿರ.


ಇದು ಭದ್ರಾಚಲಂ ನಲ್ಲಿ ಇರುವ ಶ್ರೀ ರಾಮ ಮಂದಿರ.
ಚಿತ್ರ ಕೃಪೆ : ಅಂತರ್ಜಾಲ

ಇದು ಭದ್ರಾಚಲಂ ನಲ್ಲಿ ಇರುವ ಶ್ರೀ ರಾಮ ಮಂದಿರ.



ಇದು ಭದ್ರಾಚಲಂ ನಲ್ಲಿ ಇರುವ ಶ್ರೀ ರಾಮ ಮಂದಿರ.
ಚಿತ್ರ ಕೃಪೆ : ಅಂತರ್ಜಾಲ

All About Lord Sri Rama

ಶ್ರೀ ರಾಮಚಂದ್ರ ಸ್ವಾಮಿಯ ಒಂದು ಬ್ಲಾಗ್ ಓಪನ್ ಮಾಡಬೇಕು ಅದರಲ್ಲಿ ಎಲ್ಲಿಯೂ ಸಿಗದಂತಹ ಒಳ್ಳೆ ಸಂಗತಿಗಳನ್ನ ಹಾಕಬೇಕು ಅಂತ ತುಂಬ ದಿವಸಗಳಿಂದ ಯೋಚಿಸ್ತಾ . ಇದ್ದೆ ಕಾಲ ಈಗ ಕೂಡಿ ಬಂದಿದೆ. ಇದರಿಂದ ಎಲ್ಲರಿಗು ಒಳ್ಳೆ ಮಾಹಿತಿ ಸಿಗಲಿ ಮತ್ತು ಭಗವಂತನ ಕೃಪೆಗೆ ಪಾತ್ರರಾಗಲಿ ಎಂದು ಆಶಿಸುತ್ತೇನೆ.

ಜೈ ಶ್ರೀ ರಾಮ.