Friday, December 17, 2010

ಶ್ರೀ ರಾಮ ಹೃದಯಂ

*********************************************************
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
*********************************************************
ಶ್ರೀ ಮಹದೇವ ಉವಾಚ:-

ತತೋ ರಾಮಃ ಸ್ವಯಂ ಪ್ರಾಹ ಹನುಮಂತ ಮುಪಸ್ಥಿತಂ |
ಶೃಣು ತತ್ವಂ ಪ್ರಾವಕ್ಷ್ಯಾಮಿ ಹ್ಯಾತ್ಮಾನಾತ್ಮ ಪರಾತ್ಮ ನಾಮ್. ||

ಆಕಾಶಸ್ಯ ಯಥಾ ಭೇಧಸ್ತ್ರಿವಿಧೋ ದೃಶ್ಯತೇ ಮಹಾನ್
ಜಲಾಶಯೇ ಮಹಾಕಾಶಸ್ತದವಚಿನ್ನ ಏವ ಹಿ |
ಪ್ರತಿ ಬಿಂಬಾಖ್ಯಮಪರಂ ದೃಶ್ಯತೇ ತ್ರಿವಿಧಾಂ ನಭಃ |
ಬುಧ್ಯವಚ್ಛಿನ್ನ ಚೈತನ್ಯ ಮೇಕಂ ಪೂರ್ಣ೦ ಯಥಾ ಪರಮ್ ||

ಆಭಾಸಸ್ತ್ವಪರಂ ಬಿಂಬಭೂತಮೇವಂ ತ್ರಿಧಾ ಚಿತಿಃ |
ಸಾಭಾಸಬುದ್ಧೇಃ ಕರ್ತೃತ್ವಮವಿಚಿನ್ನೇS ವೀಕಾರಿಣೀ ||

ಸಾಕ್ಷಿಣ್ಯಾರೋಪ್ಯತೇ ಭ್ರಾಂತ್ಯಾ ಜೀವತ್ವಂ ಚ ತಥಾ ಬುಧೈ |
ಆಭಾಸಸ್ತು ಮೃಷಾ ಬುದ್ಧಿರ ವಿದ್ಯಾ ಕಾರ್ಯಮುಚ್ಯತೇ ||

ಅವಿಚ್ಛಿನ್ನಮ್ ತು ತದ್ಬ್ರಹ್ಮ ವಿಚ್ಛೇದಸ್ತು ವಿಕಲ್ಪಿತ |
ಅವಿಚ್ಛಿನ್ನಸ್ಯ ಪೂರ್ಣೇನಾ ಏಕತ್ವಂ ಪ್ರತಿಪಧ್ಯತೇ ||

ತತ್ವಮಸ್ಯಾದಿ ವಾಕ್ಯೈಶ್ಚ ಸಾಭಾ ಸಸ್ಯಾಹಮಸ್ತಥಾ |
ಐಕ್ಯ ಜ್ಞಾನಮ್ ಯದೋತ್ಪನ್ನಂ , ಮಹಾ ವಾಕ್ಯೇನ ಚಾತ್ಮನೋಃ ||

ತದಾS ವಿದ್ಯಾಸ್ವಕಾರ್ಯೈಶ್ಚ ನಶ್ಯತ್ಯೇಪನ ಸಂಶಯಃ |
ಏತದ್ವಿಜ್ಞಾಯ ಮದ್ಭಕ್ತೋ ಮಾದ್ಭಾವಾಯೋಪಪದ್ಯತೇ ||

ಮದ್ಭಕ್ತಿ ವಿಮುಖಾನಂ ಹಿ ಶಾಸ್ತ್ರ ಗರ್ತೇಷು ಮುಹ್ಯತಾಮ್ |
ನ ಜ್ಞಾನಮ್ ನ ಮೋಕ್ಷ ಸ್ಯಾತ್ ತ್ತೇಷಾ೦ ಜನ್ಮಶತೈರಪಿ ||

ಇದಂ ರಹಸ್ಯಂ ಹೃದಯಂ ಮಮಾತ್ಮನೋ
ಮಯೈವ ಸಾಕ್ಷಾತ್ ಕಥಿತಂ ತವಾನಘ |
ಮದ್ಭಕ್ತಿ ಹೀನಾಯ ಶಠಾಯ ನ ತ್ವಯಾ
ದಾತವ್ಯಮೈ೦ದ್ರಾದಪಿ ರಾಜ್ಯತೋSದಿಕಂ ||

|| ಇತಿ ಶ್ರೀ ಮದಧ್ಯಾತ್ಮ ರಾಮಾಯಣೇ ಬಾಲಕಾಂಡೇ ಶ್ರೀ ರಾಮ ಹೃದಯಂ ||

Thursday, November 4, 2010

$ ಶ್ರೀ ರಾಮ ಪ್ರಾತಃ ಸ್ಮರಣಮ್ $

|| ಶ್ರೀರಸ್ತು ||
|| ಶ್ರೀ ರಾಮ ಸಮರ್ಥ ||

$ ಶ್ರೀ ರಾಮ ಪ್ರಾತಃ ಸ್ಮರಣಮ್ $

===============================


ಪ್ರಾತಃ ಸ್ಮರಾಮಿ ರಘುನಾಥ ಮುಖರವಿಂದಂ ಮಂದಸ್ಮಿತಂ ಮಧುರಭಾಷಿ ವಿಶಾಲಭಾಲಮ್ |
ಕರ್ಣಾವಾಲಂಬಿ ಚಲ ಕಂಡಲಶೋಭಿಗಂಡಂ ಕರ್ಣಾ೦ತದೀರ್ಘನಯನಂ ನಯನಾಭಿರಾಮಮ್ || 1 ||

ಪ್ರಾತರ್ಭಜಾಮಿ ರಘುನಾಥ ಕರಾರವಿಂದಂ ರಕ್ಷೋಗಣಾಯ ಭಯದಂ ವರದಂ ನಿಜೇಭ್ಯಃ |
ಯಧ್ ರಾಜಸಂಸಧಿ ವಿಭಿಧ್ಯ ಮಹೇಷಚಾಪಮ್ ಸೀತಾಕರಗ್ರಹಣಮಂಗಲಮಾಪಸದ್ಯಃ || 2 ||

ಪ್ರಾತರ್ನಮಾಮಿ ರಘುನಾಥಪದಾರವಿಂದಂ ಪದ್ಮಾಂಕುಶಾದಿ ಶುಭರೇಖಿ ಸುಖಾವಹಂ ಮೇ |
ಯೋಗೀ೦ದ್ರ ಮಾನಸ ಮಧುವ್ರತಸೇವ್ಯಮಾನ೦ ಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || 3 ||

ಪ್ರಾತರ್ವದಾಮಿ ವಚಸಾ ರಘುನಾಥನಾಮ ವಾಗ್ದೋಷಹಾರಿ ಸಕಲಂ ಕಮಲಂ ಕರೋತಿ |
ಯತ್ ಪಾರ್ವತೀ ಸ್ವಪತಿನಾ ಸಹಭೋಕ್ತುಕಾಮಾ ಪ್ರೀತ್ಯಾ ಸಹಸ್ರ ಹರಿನಾಮಸಮ೦ ಜಜಾಪ || 4 ||

ಪ್ರಾತಃಶ್ರಯೇ ಶ್ರುತಿನುತಾ೦ ರಘುನಾಥಮೂರ್ತಿ೦ ನೀಲಾಂಬುಜೋತ್ಪಲ ಸಿತೇತರರತ್ನನೀಲಾಮ್ |
ಆಮುಕ್ತ ಮೌಕ್ತಿಕ ವಿಶೇಷ ವಿಭೂಷಣಾಡ್ಯಾ೦ ದ್ಯೇಯಾ೦ ಸಮಸ್ತಮುನಿಭಿರ್ಜನ ಮುಕ್ತಿ ಹೇತುಮ್ || 5 ||

ಯಃ ಶ್ಲೋಕ ಪಂಚಕಮಿದಂ ಪ್ರಯತಃ ಪಠೇತ್ತು ನಿತ್ಯಂ ಪ್ರಭಾತಸಮಯೇ ಪುರುಷಃ ಪ್ರಬುದ್ಧಃ |
ಶ್ರೀರಾಮ ಕಿಂಕರ ಜನೇಷು ಏವ ಮುಖ್ಯೋ ಭೂತ್ವಾ ಪ್ರಯಾಸಿ ಹರಿಲೋಕವನನ್ಯಲಭ್ಯಮ್ || 6 ||

Wednesday, October 27, 2010

ಮಾಘ ಮಳೆ ನೆನೆಯೇ ರಾಮನ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ಬರದ ಬಾಳಿಗೆ ಹಸಿರನೀಯ ಬಾರದೆ
ಆರಿದ ಹೃದಯಕೆ ಅಮೃತನೀಯ ಬಾರದೆ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ಹರುಷದ ಸ್ಪರ್ಶದಿ ಭೂಮಿ ಮಿಂದಳು
ಹೊಸದಾದ ಸುಮಧುರ ಸುವಾಸನೆ ಬೀರಿಹಳು

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ನೀಲಿ ಕಂಗಳ ಕಣ್ಣೀರಿನಿಂದ ನಮ್ಮ ನೆನೆದೆ
ನನ್ನ ಪ್ರೀತಿಯ ರಾಮನ ಒಮ್ಮೆ ನೆನೆಯ ಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ತುಂತುರು ಹನಿಗಳ ಮಧುರ ಮಾಲೆಯ ಹೆಣೆದೆ
ನನ್ನ ಪ್ರೀತಿಯ ರಾಮನಿಗೆ ಆ ಮಾಲೆ ಸಿಂಗರಿಸಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

Sunday, August 8, 2010

ನೆನೆಯೆ ರಾಮ ನಾಮವಾ

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ನಾನು ಎಂಬ ರಾಗದಲ್ಲಿ
ತಾಳ ತಂತಿ ಹರಿಯಿತಲ್ಲ
ಕರಗಿ ಕರಗಿ ಹೋಯಿತಲ್ಲ
ಆಯು ಎಂಬ ಮಾಯೆಯು ..

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ಸಂತನಂತೆ ಬಂದೆ ಇಲ್ಲಿ
ಸಂತೆಯಲ್ಲಿ ಕಳೆದೆನಾ
ಮಧುರ ಭಾವ ಬೆಳೆಯಲಿಲ್ಲ
ಕ್ಷಮಿಸು ನಿನ್ನ ನೆನಯಲಿಲ್ಲ ..