Wednesday, June 24, 2009

ನೋವನ್ನು ಮರೆಯುವದು ಹೇಗೆ .....

ಹಲವು ಬಾರಿ ನಾವು ಏನೋ ತೊಂದರೆ ಅಥವಾ ಕಷ್ಟ ಅನುಭವಿಸ್ತಿರ್ಥಿವಿ. ನಾವು ಮಾನಸಿಕವಾಗಿಯೋ ಅಥವಾ ದೈಹಿಕವಾಗಿಯೋ ತೊಂದರೆ ಅನುಭವಿಸಿರುತ್ತೆವೆ. ಅದರಿಂದ ಹೊರಗೆ ಬರುವುದು ಹೇಗೆ?. ಅದರಿಂದ ಹೊರಬರುವ ಒಂದು trick ಹೇಳುತ್ತೇನೆ . ನಾವು ಅನುಭಿಸುತ್ತಿರುವ ಕಷ್ಟ ತುಂಬಾ ನಿಸ್ಕೃಷ್ಟವಾದ ಕಷ್ಟ ಎಂದು ತಿಳಿದು ನಡೆಯುವದು. ಅದು ಹೇಗೆಂದರೆ ಈಗೆ ಆಗಿರುವ ತೊಂದರಿಗಿಂತ ದೊಡ್ಡದೊಂದು ತೊಂದರೆ ನಮಗೆ ಬರಬಹುದಾಗಿತ್ತು ಅದು ಇಷ್ಟರಲ್ಲಿ ಮುಗಿದೆದೆ ಅಂತ ತಿಳಿಯುವದು. ಎಲ್ಲ ತೊದರೆಗಳಿಗಿಂತ ಮಾನಸಿಕವಾಗಿ ಅನುಭವಿಸುವ ತೊಂದರೆ ತುಂಬಾ ಅಪಾಯಕಾರಿ. ನಮಗೆ ನಿಜವೆನ್ನಿಸಿದ ತೊಂದರೆಯನ್ನು ಯಾರಿಗಾದರೂ ಹೇಳಿದರೆ ಅದರಿಂದ ಮನಸ್ಸಿಗೆ ಶಾಂತಿ ಸಮಾಧಾನ ಸಿಗುತ್ತೆ. ಅದು ಬಿಟ್ಟು ಮನಸಿನಲ್ಲೇ ಕೊರಗಿದರೆ ನಮಗೆ ಸಿಗುವ ಲಾಭ ಮಾತ್ರ ದೊಡ್ಡದೊಂದು ಸೊನ್ನೆ. ಯಾವ ಕಷ್ಟವೆ ಇರಲಿ ಅದು ಆ ಕ್ಷಣಕ್ಕೆ ಮಾತ್ರ ದೊಡ್ಡದೆಂದು ಅನ್ನಿಸಿರುತ್ತೆ . ಅದಕ್ಕೆ ಹೇಳುವದು "ಕಾಲಾಯ ತಸ್ಮೈಯ ನಮಃ " ಅಂತ.
ನಾವು ಅನುಭವಿಸುವ ಕಷ್ಟ ತೊಂದರೆ ಯನ್ನು ಒಂದು ಹಾಳೆಯ ಮೇಲೆ ಬರೆದು ಅದರಿಂದ ಬರುವ Solution ಗಳೆನೆಂದು ಯೋಚಿಸಿದಾಗ ಮಾತ್ರ ಪರಿಹಾರ ಗೊತ್ತಾಗುವದು (Every Problem has a Solution). ಯಾವ ತೊಂದರೆಗಳು ತಾನಾಗೇ ಬರುವದಿಲ್ಲ ಅದನ್ನು ನಾವು ಅವಹಾನಿಸಿರುತ್ತೇವೆ . ಅದು ಬರುವ ಮೊದಲೇ ಅದನ್ನು ತಡೆಯುವ ಯೋಚನೆ ಮಾಡಬೇಕಾಗುತ್ತೆ . ನಾವು ಪ್ರತಿ ರಾತ್ರಿ ಮಲಗುವ ಮೊದಲು ನಮ್ಮ ಮುಖವನ್ನು ಕನ್ನಡಿಯಲ್ಲಿ ನಾವೇ ನೋಡಿಕೊಳ್ಳಬೇಕು ನಮ್ಮ ಮುಖ ನಮಗೆ ಯಾವತ್ತಾದರೂ ವಕ್ರ ಅಥವಾ ಅಸಹ್ಯವೆನಿಸಿದಾಗ ನಾವು ಏನೋ ತಪ್ಪು ಮಾಡಿದ್ದೇವೆ ಅಂತ ತಿಳಿಯಬೇಕು . ಅದನ್ನು ನಾವು ಗೆಳೆಯರ ಜೊತೆ ಮಾತುಕತೆ ಇಂದ ಪರಿಹಾರ ಮಾಡಿಕೊಳ್ಳಬಹುದು . ಸಾರೀ ಕೆಳುವದರಿಂದ ಯಾರದು ಮಾನ ಮರ್ಯಾದೆ ಹೋಗುವದಿಲ್ಲ . ನಾವು ಯಾವುದೇ ಕೆಲಸ ಮಾಡುವಾಗ ಅಥವಾ ಮಾತನಾಡುವಾಗ ಅದರ ಅಂತಿಮ ತೀರ್ಪು (End Result) ತಿಳಿದು ಮಾಡಬೇಕು. ಇದರಿಂದ ನಮಗಾಗುವ ಅನೇಕಾನೇಕ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು .
ಇವತ್ತು ಒರಿಸ್ಸಾ ಪುರಿ ಜಗನ್ನಾಥ ಸ್ವಾಮಿಯ ರಥ ಯಾತ್ರೆ . ಭಗವಂತ ಸದಾ ಎಲ್ಲರಿಗು ನೋವು ಮರೆಯುವ ಮತ್ತು ಪ್ರೀತಿಯಿಂದ ಮೆರೆಯುವ ಶಕ್ತಿ ಕೊಡಲೆಂದು ದೇವರನ್ನು ಪ್ರಾರ್ಥಿಸೋಣ ......
ಜೈ ಜಗನ್ನಾಥ .....

ಚಿತ್ರ ಕೃಪೆ : ಅಂತರ್ಜಾಲ

2 comments:

  1. ಆತ್ಮೀಯ ಗೋಪಾಲರೆ ,

    ನಿಮ್ಮ ವಿಚಾರವನ್ನ ಹಂಚಿ ಕೊಂಡಿದ್ದಕ್ಕೆ ಅಭಿನಂದನೆಗಳು.
    ನಿಮ್ಮ ಅನಿಸಿಕೆ ನನ್ನ ಅನಿಸಿಕೆಯೂ ಹೌದು

    ReplyDelete
  2. ಆತ್ಮೀಯ ಲೋದ್ಯಾಶಿಯವರೇ

    ತುಂಬಾ ಧನ್ಯವಾದಗಳು.

    ReplyDelete