ನಾವು ಅನುಭವಿಸುವ ಕಷ್ಟ ತೊಂದರೆ ಯನ್ನು ಒಂದು ಹಾಳೆಯ ಮೇಲೆ ಬರೆದು ಅದರಿಂದ ಬರುವ Solution ಗಳೆನೆಂದು ಯೋಚಿಸಿದಾಗ ಮಾತ್ರ ಪರಿಹಾರ ಗೊತ್ತಾಗುವದು (Every Problem has a Solution). ಯಾವ ತೊಂದರೆಗಳು ತಾನಾಗೇ ಬರುವದಿಲ್ಲ ಅದನ್ನು ನಾವು ಅವಹಾನಿಸಿರುತ್ತೇವೆ . ಅದು ಬರುವ ಮೊದಲೇ ಅದನ್ನು ತಡೆಯುವ ಯೋಚನೆ ಮಾಡಬೇಕಾಗುತ್ತೆ . ನಾವು ಪ್ರತಿ ರಾತ್ರಿ ಮಲಗುವ ಮೊದಲು ನಮ್ಮ ಮುಖವನ್ನು ಕನ್ನಡಿಯಲ್ಲಿ ನಾವೇ ನೋಡಿಕೊಳ್ಳಬೇಕು ನಮ್ಮ ಮುಖ ನಮಗೆ ಯಾವತ್ತಾದರೂ ವಕ್ರ ಅಥವಾ ಅಸಹ್ಯವೆನಿಸಿದಾಗ ನಾವು ಏನೋ ತಪ್ಪು ಮಾಡಿದ್ದೇವೆ ಅಂತ ತಿಳಿಯಬೇಕು . ಅದನ್ನು ನಾವು ಗೆಳೆಯರ ಜೊತೆ ಮಾತುಕತೆ ಇಂದ ಪರಿಹಾರ ಮಾಡಿಕೊಳ್ಳಬಹುದು . ಸಾರೀ ಕೆಳುವದರಿಂದ ಯಾರದು ಮಾನ ಮರ್ಯಾದೆ ಹೋಗುವದಿಲ್ಲ . ನಾವು ಯಾವುದೇ ಕೆಲಸ ಮಾಡುವಾಗ ಅಥವಾ ಮಾತನಾಡುವಾಗ ಅದರ ಅಂತಿಮ ತೀರ್ಪು (End Result) ತಿಳಿದು ಮಾಡಬೇಕು. ಇದರಿಂದ ನಮಗಾಗುವ ಅನೇಕಾನೇಕ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು .
ಇವತ್ತು ಒರಿಸ್ಸಾ ಪುರಿ ಜಗನ್ನಾಥ ಸ್ವಾಮಿಯ ರಥ ಯಾತ್ರೆ . ಭಗವಂತ ಸದಾ ಎಲ್ಲರಿಗು ನೋವು ಮರೆಯುವ ಮತ್ತು ಪ್ರೀತಿಯಿಂದ ಮೆರೆಯುವ ಶಕ್ತಿ ಕೊಡಲೆಂದು ದೇವರನ್ನು ಪ್ರಾರ್ಥಿಸೋಣ ......
ಜೈ ಜಗನ್ನಾಥ .....
ಚಿತ್ರ ಕೃಪೆ : ಅಂತರ್ಜಾಲ
ಆತ್ಮೀಯ ಗೋಪಾಲರೆ ,
ReplyDeleteನಿಮ್ಮ ವಿಚಾರವನ್ನ ಹಂಚಿ ಕೊಂಡಿದ್ದಕ್ಕೆ ಅಭಿನಂದನೆಗಳು.
ನಿಮ್ಮ ಅನಿಸಿಕೆ ನನ್ನ ಅನಿಸಿಕೆಯೂ ಹೌದು
ಆತ್ಮೀಯ ಲೋದ್ಯಾಶಿಯವರೇ
ReplyDeleteತುಂಬಾ ಧನ್ಯವಾದಗಳು.