ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ. ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ.
ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು.
ನಿನಗೆ ಎಷ್ಟು ಜನ ಪರಿಚಯ?
ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦ ಜನ ಎಂದ.
೧೦೦೦೦ ಜನಗಳ ಬಿಟ್ಟು ಬೇರೆ ಜನಗಳೇ ಗೊತ್ತಿಲ್ಲ ನಿನಗೆ. ಆದಿ ಕಾಲದಿಂದಲೂ ಕೋಟಿ ಕೋಟಿ ಜನ ನಂಬಿರುವ ದೇವರ ಬಗ್ಗೆ ಅನುಮಾನವಾ?... ಎಂದರು.
ಮತ್ತೊಂದು ಪ್ರಶ್ನೆ ಮುಂದಿಟ್ಟರು.
ನಿನ್ನ ಇರುವಿಕೆ ಹೇಗೆ ಸಮರ್ಥಿಸುವೆ ಎಂದು.
ನಾನು ನಿಮ್ಮ ಜೊತೆ ಮಾತನಾಡುತ್ತಿರುವೇನಲ್ಲ ಎಂದ.
ನೀನು ಹೇಗೆ ಧರೆಗೆ ಬಂದೆ.
ನನ್ನ ತಂದೆ ಮತ್ತು ತಾಯಿಗಳಿಂದ.
ಹಾಗೆ ನಿನ್ನ ತಂದೆ ಇರುವಿಕೆ ಸಮರ್ಥಿಸು ಎಂದರು.
ನನ್ನ ಅಜ್ಜ ಮತ್ತು ಅಜ್ಜಿ ಎಂದ.
ಮತ್ತೆ ನಿಮ್ಮ ಅಜ್ಜನ ಇರುವಿಕೆ ಸಮರ್ಥಿಸು ಎಂದರು.
ಅವನು ಮತ್ತೆ ಮುತ್ತಜ್ಜ ಮಾತು ಮುತ್ತಜ್ಜಿ ಎಂದ.
ಹಾಗೆ ಮತ್ತೆ ಮುತ್ತಜ್ಜ ಇರುವಿಕೆ ಸಮರ್ಥಿಸು ಎಂದರು.
ಅವನು ಹಾಗೆ ಗಿರಿ ಮುತ್ತಜ್ಜ ಮತ್ತು ಗಿರಿ ಮತ್ತಜ್ಜಿ ಎಂದ..
ನಿನ್ನ ಗಿರಿ ಮುತ್ತಜ್ಜ ಇದ್ದ .. ಅಂತ ಹೇಗೆ ಹೇಳುವೆ ನೀನು ಹೇಳುವದೆಲ್ಲ ಸುಳ್ಳು ಎಂದರು .....ಈಗ ಅವರನ್ನು ತೋರಿಸು ಎಂದರು.
ಆಗ ಅವನ ತಪ್ಪಿನ ಅರಿವಾಗಿ ಆ ಸಾಧುಗಳ ಶಿಷ್ಯನಾಗಿ ಹೋದ.
Monday, March 22, 2010
ಶ್ರೀ ಗುರುವಾಣಿ
ಒಂದು ದಿವಸ ಗುರುಗಳ ಬಳಿ ಬಂದ ಒಬ್ಬ ಮನುಷ್ಯ. ಗುರುಗಳಿಗೆ ನಮಸ್ಕರಿಸಿ, ಗುರುಗಳೇ ನನಗೆ ದೇವರ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದ. ಆಗ ಗುರುಗಳು ಶಾಂತ ಚಿತ್ತದಿಂದ ಅವನಿಗೆ ತಮ್ಮ ಬಳಿ ಬರಮಾಡಿಕೊಂಡು, ನಿನ್ನ ಸಮಸ್ಯೆ ಏನು ಎಂದು ಕೇಳಿದರು. ಅದಕ್ಕೆ ನಾನು ದೇವರ ಬಗ್ಗೆ ತುಂಬಾ ನಂಬಿಕೆ ಇಟ್ಟು ಕೊಂಡಿದ್ದೆ. ದಿನವು ಪೂಜೆ ಮಾಡುತ್ತಿದ್ದೆ. ಒಮ್ಮೆ ನಾನು ಸೋಲಾಪುರದಲ್ಲಿ, ನನ್ನ ಒಬ್ಬ ಗೆಳೆಯನನ್ನು ಭೇಟಿ ಮಾಡಿದೆ. ಅವ ಆಗರ್ಭ ಶ್ರೀಮಂತ. ಅವನಿಗೆ ದೇವರ ಬಗ್ಗೆ ಸ್ವಲ್ಪ ಕೂಡ ನಂಬಿಕೆ ಇಲ್ಲ. ಆದರು ದೇವರು ಅವನಿಗೆ ಎಲ್ಲವನ್ನು ಕರುಣಿಸಿದ್ದಾನೆ. ನನಗೆ ಏಕೆ ಹೀಗೆ? ಎಂದು ಕೇಳಿದ. ಆಗ ಗುರುಗಳು ನೀನು ನಿನ್ನನ್ನು ಏಕೆ ಅವನ ಜೊತೆ ಏಕೆ ಹೊಂದಾಣಿಕೆ ಮಾಡಿ ಯೋಚಿಸುವೆ. ಅದು ಅವನು ಪಡೆದ ಕರ್ಮದ ಫಲ. ನಿನಗೆ ಏನು ಬೇಕು ಹೇಳು ನಾನು ನಿನಗೆ ಕೊಡಬಲ್ಲೆ ಎಂದರು. ಆಗ ಆ ವ್ಯಕ್ತಿ ತುಂಬಾ ಯೋಚನಗೆ ಬಿದ್ದ. ತುಂಬಾ ಹೊತ್ತು ಯೋಚಿಸಿ ಗಲಿಬಿಲಿಗೊಂಡು ಕಡೆಗೆ ನನಗೆ 10 ಕೋಟಿ ರೂಪಾಯಿಗಳು ಬೇಕು. ಆಗ ಗುರುಗಳು ಆಯಿತು ಕೊಡುತ್ತೇನೆ. ಆದರೆ ನೀನು ಶ್ರೀ ರಾಮ ನಾಮಸ್ಮರಣೆ ಮಾಡುತ್ತ ಕೆಲ ದಿನ ಇಲ್ಲಿ ಉಳಿದು ಕೊಳ್ಳಬೇಕು ಎಂದರು. ಮತ್ತೆ ಎರಡು ದಿವಸ ಆದ ಮೇಲೆ ಆ ಮನುಷ್ಯ ನನಗೆ 20 ಕೋಟಿ ಬೇಕು ಎಂದ. ಮತ್ತೆ ಆಯಿತು ಎಂದರು ಗುರುಗಳು. ದಿನವು ನಾಮಸ್ಮರಣೆ, ಭಜನೆ ಮಾಡುತ್ತ ಒಂದು ತಿಂಗಳು ಕಳೆದವು. ಆ ಮನುಷ್ಯ ತುಂಬಾ ಕೋಪಗೊಂಡು ಒಂದು ದಿವಸ ನಾಮಸ್ಮರಣೆಗೆ ಬರಲಿಲ್ಲ. ಆಗ ಗುರುಗಳು ಎಲ್ಲಿ ಆ ಮನುಷ್ಯ ಎಂದು ಶಿಷ್ಯರನ್ನು ಕೇಳಿದರು. ಆಗ ಶಿಷ್ಯರು ಅವರು 20 ಕೋಟಿ ರುಪಾಯಿ ಸಿಗುವವರೆಗೂ ಅವರು ಬರುವದಿಲ್ಲವಂತೆ ಎಂದು ಹೇಳಿದರು. ಆಗ ಗುರುಗಳು ಅವರ ಬಳಿ ಹೋಗಿ, ಇಂದಿನ ನಾಮಸ್ಮರಣೆ, ಭಜನೆ, ಪ್ರಸಾದ ಆದ ಮೇಲೆ ನಿಮಗೆ ಒಂದು ಕೊಡುವೆ ಎಂದು ಹೇಳಿದರು. ಪ್ರಸಾದವಾದ ಬಳಿಕ ಗುರುಗಳು ಅವನನ್ನು ಕರೆದುಕೊಂಡು ಹೋಗಿ ನೋಡು ಇಲ್ಲಿದೆ ನಿನ್ನ ದುಡ್ಡು ಎಂದು ತೋರಿಸಿದರು. ಆಗ ಆ ಮನುಷ್ಯ ತುಂಬಾ ಸಂತೋಷಗೊಂಡ. ಮತ್ತು ಕೆಲವೇ ನಿಮಿಷದಲ್ಲಿ ಮತ್ತೆ ಚಿಂತೆಯಲ್ಲಿ ಮುಳುಗಿದ. ಆಗ ಗುರುಗಳು ನಿನಗೆ ನಿನ್ನ ಮೇಲೆ ಭರವಸೆ ಇಲ್ಲ ಎಂದರು. ನೀನು ಕೇಳಿದ್ದು 10 ಕೋಟಿ, ಮತ್ತೆ 2 ದಿವಸ ಆದ ಮೇಲೆ 20 ಕೋಟಿ ಬೇಕು ಎಂದೇ. ನಾನು ಅದನ್ನೇ ನಿನಗೆ ಕೊಟ್ಟಿರುವೆ. ಆದರು ನಿನ್ನ ಚಹರೆ ಮೇಲೆ ಚಿಂತೆಯ ಛಾಯೆ ಇದೆ. ದೇವರು ಅವನ ಯೋಗ್ಯತೆ ತಕ್ಕಂತೆ ಅವನಿಗೆ ಎಲ್ಲವನ್ನು ಕರುಣಿಸಿದ್ದಾನೆ. ಆದರೂ ನಮ್ಮ ದುರಾಸೆಯ ಛಾಯೆ ಬಿಡುವದಿಲ್ಲ. ನಿನ್ನ ಗೆಳೆಯನಿಗೆ ದೇವರ ಮೇಲೆ ನಂಬಿಕೆ ಇಲ್ಲದಿದ್ದರೂ ಅವನಿಗೆ ಅಷ್ಟು ಶ್ರೀಮಂತಿಕೆ ಬಂದಿದ್ದು ನಿನಗೆ ಸಹಿಸಿ ಕೊಳ್ಳಲಾಗಲಿಲ್ಲ. ಮೊದಲು ನಿನಗೆ ಬೇಕಾಗಿದ್ದು ಮನಶಾಂತಿ. ಇಷ್ಟಾದರೂ ನಿನಗೆ ದುಡ್ಡು ಬೇಕೆಂದರೆ ನೀನು ಧಾರಾಳವಾಗಿ ತೆಗೆದುಕೊಂಡು ಹೋಗು ಎಂದರು. ಆಗ ಆ ಮನುಷ್ಯ ಆ ದುಡ್ಡನ್ನು ತೆಗೆದು ಕೊಂಡು ಹೋಗಲು ಆಲೋಚಿಸಿ, ಬೇಕಾಗುವ ಬಂಡಿಗಳನ್ನು ಲೆಕ್ಕ ಹಾಕತೊಡಗಿದ. ಮತ್ತೆ ದಾರಿಯಲ್ಲಿ ಎಂದರು ಕಳ್ಳತನ ವಾದರೆ ಎಂಬ ಭಯ ಬೇರೆ ಕಾಡ ತೊಡಗಿತು. ಆಗ ಆ ಮನುಷ್ಯ ನನಗೆ ಈ ಎರಡು ಕೋಟಿ ಗಿಂತ ನಿಮ್ಮ ಸಾನಿಧ್ಯ ಮತ್ತು ಮನಃ ಶಾಂತಿ ಬೇಕೆಂದು ಹೇಳಿ ಗುರುಗಳ ಶಿಷ್ಯನಾಗಿ ನಾಮಸ್ಮರಣೆ ಮಾಡುತ್ತ ಉಳಿದುಕೊಂಡ.
Subscribe to:
Posts (Atom)